Is there any inscriptional evidence for the Kottar place name or tribal name ?
Friday, February 11, 2011
Tuesday, February 8, 2011
Tulu 0oru: ಮಣ್ಣಾಯಿತು ಅಯೋಧ್ಯೆ
"ಉರುಳಿಸಿದ್ದು ಬಾಬ್ರಿಮಸೀದಿಯನ್ನು
ಅದರಡಿಗೆ ಬಿದ್ದು ಮಣ್ಣಾಗಿದ್ದು ಅಯೋಧ್ಯೆ.
ಪ್ರತಿಷ್ಟೆ ಮೆರೆಯಲು ಉರುಳಿಸಿದ್ದು
ಬಾಬರ್ ಮಸೀದಿಯನ್ನು
ಮಸೀದಿಯೊಂದಿಗ..."
ಮಣ್ಣಾಯಿತು ಅಯೋಧ್ಯೆ
ಉರುಳಿಸಿದ್ದು ಬಾಬ್ರಿಮಸೀದಿಯನ್ನು
ಅದರಡಿಗೆ ಬಿದ್ದು ಮಣ್ಣಾಗಿದ್ದು ಅಯೋಧ್ಯೆ.
ಪ್ರತಿಷ್ಟೆ ಮೆರೆಯಲು ಉರುಳಿಸಿದ್ದು
ಬಾಬರ್ ಮಸೀದಿಯನ್ನು
ಮಸೀದಿಯೊಂದಿಗೆ ಉರುಳಿದ್ದು
ರಾಮ ಮಂದಿರ !
ಮಸೀದ ಮಂದಿರ ಉರುಳುವ ಮುನ್ನ
ಅಯೋಧ್ಯೆ ಐತಿಹಾಸಿಕ ಪುರಾಣ ಸ್ಥಳ
ಧರ್ಮ ಸಮನ್ವಯದ ಕ್ಷೇತ್ರ .
ಉರುಳಿದ ಮೇಲೆ
ಧರ್ಮ ಕಲಹದ ಕೇಂದ್ರ !
Sunday, February 6, 2011
ಕೋಮುವಾದಿ-ಯಾರು
ಚಿ. ಮೂ ಅವರನ್ನು ರಾಜ್ಯಪಾಲರು 'ಕೋಮುವಾದಿ' ಎಂದು ಆರೋಪಿಸಿ ಅವರಿಗೆ ಬೆಂಗಳೂರು ವಿಶ್ವ ವಿದ್ಯಾಲಯ ಶಿಫಾರಸು ಮಾಡಿರುವ ಗೌರವ ಡಾಕ್ಟರೇಟುನ್ನು ನಿರಾಕರಿಸಿದ ರಾಜ್ಯ ಪಾಲರ ಕ್ರಮದ ಹಿನ್ನೆಲೆಯಲ್ಲಿ ನಾನು ಈ ಲೇಖನವನ್ಬಂನು ಪ್ಟರಕಟಿಸಲಿಚ್ಚಿಸಿದ್ದೆನೆ. ನನ್ನ ಕೃತಿಗೆ ಕ್ಷೇತ್ರ ಕಾರ್ಯ ಮುಗಿಸಿದ ದಿನಗಳಲ್ಲಿ ನನಗಾದ ಅನುಭವಗಳ ಹಿನ್ನೆಲಯಲ್ಲಿ ಈ ಬರಹವನ್ನು ಪೂರ್ಣ ಗೊಳಿಸಿದ್ದೆ. .ಅದನ್ನು ಪ್ರಕಟಿಸುವುದು ಈ ಸಂದರ್ಭದಲ್ಲಿ ಸೂಕ್ತ ಎನ್ನುವುದು ನನ್ನ ಅಭಿಪ್ರಾಯ.
ರಾಜ್ಯಪಾಲರು ಮತಾಂತರವನ್ನು ವಿರೋಧಿಸುವವರು 'ಕೋಮುವಾದಿಗಳು' ಎಂದು ಅರೋಪಿಸುವುದು ಎಷ್ಟು ಸರಿ?
ದುರ್ಬಲ ಮನಸ್ಸಿನವರನ್ನು, ಆರ್ಥಿಕವಾಗಿ ಹಿಂದುಳಿದವರನ್ನು, ಜಾತೀಯತೆಯಿಂದ ನೊಂದುಕೊಂಡವರನ್ನು ಹುಡುಕಿ ಹೋಗಿ ನೆರವು ನೀಡುವ ನೆವದಲ್ಲಿ ಮಾನಸಿಕವಾಗಿ ಬ್ಲಾಕ್ ಮೇಲ್ ಮಾಡಿ ಮತಾಂತರಕ್ಕೆ ಪ್ರಯತ್ನಿಸಿರುವುದು ಎಲ್ಲರಿಗೂ ತಿಳಿದ ವಿಷಯ. ಮತಾಂತರ ಆಗುಲಿಚ್ಚಿಸುವವರು ಸಂಬಂಧ ಪಟ್ಟವರನ್ನು ತಾವೇ ಹುಡುಕಿಕೊಂಡು ಹೋಗಬೇಕೇ ವಿನಃ ಇವರು ಮೇಲೆ ತಿಳಿಸಿದವರ ಮನೆ ಬಾಗಿಲಿಗೆ ಹೋಗಿ ಅವರನ್ನು ಮತಾಂತರ ಮಾಡುವುದು ಬ್ಲಾಕ್ ಮೇಲ್ ತಂತ್ರವೇ ಆಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಪಾಲರು ಸಮಚಿತ್ತದಿಂದ ಹೇಳಿಕೆಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ.
ಸಾಹಿತ್ಯ ಜಾತ್ರೆ
ಹರಿದರು ಜನ ಹೊಳೆಯಂತೆ
ಅಣೆಕಟ್ಟಿನಲ್ಲಿ ಬಂದಿಯಾದ ನೀರಾದರು
ಸೋರುವ ನೀರು ಸೋರುತ್ತಲೇ ಇತ್ತು
ಸೇರುವ ನೀರು ಸೇರುತ್ತಲೇ ಇತ್ತು
ಒಳಗಿದ್ದವರು ಹೊಟ್ಟೆಯ ಹಸಿವಿಗೆ
ಸ್ಪಂಧಿಸಲಿಲ್ಲ.
ಬೌದ್ಧಿಕ ಹಸಿವಿನ ದಾಹ ಇಂಗಲೇ ಇಲ್ಲ
ಸಮಾರೋಪದವರೆಗೂ !
ಅಣೆಕಟ್ಟಿನಲ್ಲಿ ಬಂದಿಯಾದ ನೀರಾದರು
ಸೋರುವ ನೀರು ಸೋರುತ್ತಲೇ ಇತ್ತು
ಸೇರುವ ನೀರು ಸೇರುತ್ತಲೇ ಇತ್ತು
ಒಳಗಿದ್ದವರು ಹೊಟ್ಟೆಯ ಹಸಿವಿಗೆ
ಸ್ಪಂಧಿಸಲಿಲ್ಲ.
ಬೌದ್ಧಿಕ ಹಸಿವಿನ ದಾಹ ಇಂಗಲೇ ಇಲ್ಲ
ಸಮಾರೋಪದವರೆಗೂ !
77 ನೆಯ ಸಾಹಿತ್ಯ ಸಮ್ಮೆಳನದಲ್ಲಿ ಸನ್ಮಾನ
ಹೊರಗೆ ಪೋಲೀಸರ ಕೋಟೆ
'ಅತಿಥೀಗಳೋ ಅಭ್ಯಾಗತರೋ
ಏನೂ ಅರಿವೆವು
ಕಣ್ಣಿಗೆ ಕಾಣುವ ಬ್ಯಾದ್ಜ್ ಒಂದೇ ಸತ್ಯ"
ಹೊರಗೆ ಅವಮಾನ ಪೋಲೀಸರಿಂದ
ಒಳಗೆ ಸನ್ಮಾನ ಪರಿಷತ್ತಿನಿಂದ
ಸನ್ಮಾನ ಮುಗಿಸಿ ಹೊರನಡೆದರೆ
ಅಶೋಕ ಚಕ್ರದ ಪೋಲೀಸರೇ ಬರುತ್ತಾರೆ
" ಭಾರವೇ ಮೇಡಮ್ ಸನ್ಮಾನ "
ಎನ್ನುತ್ತಾ ನೆರವು ನೀಡುತ್ತಾರೆ.
Thursday, February 3, 2011
ಕೆಡ್ಡಸ
ಪುಯಿಂತೆಲ್ ತಿಂಗಳ ಕೊನೆಯ
ಮೂರು ದಿನಗಳು ಕೆಡ್ಡಸ!
ಭೂಮಿ ತಾಯಿ ಮುಟ್ಟಾಗುತ್ತಾಳೆ.
'ಮಾಯಿಡ್ದ್ ಬೊಕ್ಕ ಮರಿಯಾಲ'
ಸಜ್ಜಾಗುತ್ತಿದ್ದಾಳೆ ಫಲವಂತಿಕೆಗೆ
ಮಹಾ ಗರ್ಭಾಧಾರಣೆಗೆ
ಒಡಲೆಲ್ಲ ಹಸಿರು ತುಂಬಿ
ಜೀವದುಸಿರು ನೀಡಲು
ಮುಟ್ಟಾಗುತ್ತಾಳೆ
(ಪುಯಿಂತೆಲ್, ಪೊನ್ನಿ =ಮಕರ.
ಮಾಯಿ=ಮಾಗಿ)
ಮೂರು ದಿನಗಳು ಕೆಡ್ಡಸ!
ಭೂಮಿ ತಾಯಿ ಮುಟ್ಟಾಗುತ್ತಾಳೆ.
'ಮಾಯಿಡ್ದ್ ಬೊಕ್ಕ ಮರಿಯಾಲ'
ಸಜ್ಜಾಗುತ್ತಿದ್ದಾಳೆ ಫಲವಂತಿಕೆಗೆ
ಮಹಾ ಗರ್ಭಾಧಾರಣೆಗೆ
ಒಡಲೆಲ್ಲ ಹಸಿರು ತುಂಬಿ
ಜೀವದುಸಿರು ನೀಡಲು
ಮುಟ್ಟಾಗುತ್ತಾಳೆ
(ಪುಯಿಂತೆಲ್, ಪೊನ್ನಿ =ಮಕರ.
ಮಾಯಿ=ಮಾಗಿ)
Subscribe to:
Posts (Atom)